Sale!

Hanuma Mahadarshana

100.00

ಡಾ.ಲತಾರಾಜಶೇಖರ್‌ರವರ “ಹನುಮ ಮಹಾದರ್ಶನ” ಮಹಾಕಾವ್ಯವು ೨೧ನೇ ಶತಮಾನದ ಅವಿಸ್ಮರಣೀಯಕೊಡುಗೆ. , ಇದು ಯುವಪೀಳಿಗೆಗೆ ಅಪಾರ ಸ್ಪೂರ್ತಿಯಾಗುವುದರಲ್ಲಿ ಸಂಶಯವಿಲ್ಲ. ಕಾವ್ಯರಚನೆಗೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿರುವುದು ಈ ಕಾವ್ಯದ ಮತ್ತೊಂದು ವಿಶೇಷ. ವಾಲ್ಮೀಕಿ ರಾಮಾಯಣದ ಕಿಷ್ಕಂಧಾ ಕಾಂಡದ ಅನೇಕ ಪದ್ಯಗಳಲ್ಲಿ ವ್ಯಾಪಿಸಿರುವ ವಾಲಿಸುಗ್ರೀವರ ಯುದ್ಧವರ್ಣನೆ, ವಾಲಿವಧೆ, ತಾರಾವಿಲಾಪ ಇವುಗಳಾವುವೂ ಇಲ್ಲಿ ಮಾನ್ಯತೆ ಪಡೆದುಕೊಂಡಿಲ್ಲ. ಪ್ರಸಂಗಕ್ಕನುಗುಣವಾಗಿ ಈ ಕವಯಿತ್ರಿಯು ಕಥೆಯ ಸ್ಫುಟತೆಯನ್ನು ಸಾಕಾರಗೊಳಿಸಿದ್ದಾರೆ. ಈ ಹನುಮ ಮಹಾದರ್ಶನ, ಶೈಲಿಯದೃಷ್ಟಿಯಿಂದ ಪದಪುಂಜಗಳ ದೃಷ್ಟಿಯಿಂದ ನೈಪುಣ್ಯತೆವನ್ನು ಕಾದಿರಿಸಿಕೊಂಡಿದೆ. ಹನುಮಂತನ ಸಾಹಸವನ್ನು, ಶ್ರದ್ಧಾ-ಭಕ್ತಿಯನ್ನು, ಸೇವಾಭಕ್ತಿಯನ್ನು ಝಳಪಿಸುವ ನಿಟ್ಟಿನಲ್ಲಿ ಡಾ. ಲತಾರಾಜಶೇಖರ್‌ರವರ ಶ್ರಮ ಸಾರ್ಥಕವೆಂದೇ ಹೇಳಬೇಕು.

Category:

Description

ವಿಶ್ವದಲ್ಲಿಯೇ ಹೆಚ್ಚಿನ ಭಕ್ತರನ್ನು ಹೊಂದಿರುವ ಆಂಜನೇಯನು ವಿಶ್ವಖ್ಯಾತಿಯ ಆರಾಧ್ಯದೈವ. ಹನುಮಂತನ ಸೇವಾ ನಿಷ್ಟೆಯನ್ನು, ಜೀವನದರ್ಶನವನ್ನು ಹದಿಮೂರು ಸಂಪುಟಗಳ, ಏಳುನೂರ ಐವತ್ತು ಪುಟಗಳಿಗಿಂತಲೂ ಹೆಚ್ಚಿನ “ಶ್ರೀ ಹನುಮಮಹಾದರ್ಶನ” ಮಹಾಕಾವ್ಯವುತನ್ನ ವಸ್ತುವಿವೇಚನೆ, ಕಥಾ ಸಂವಿಧಾನಲಯ ವೈವಿಧ್ಯತೆಗಳಿಂದ, ಮನಸ್ಸಿನ ಅಂತರಂಗವನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಉದಾಹರಣೆಗೆ

“ಸೂರ್ಯದೇವ, ಎನಗಿಹುದೆಂದುಅಪೇಕ್ಷೆ,
ವಿದ್ಯೆಯನುಕಲಿಯಬೇಕೆಂದು, ಸ್ವೀಕರಿಸಿ ನೀವೆನ್ನನು
ನಿಮ್ಮ ಶಿಷ್ಯನನ್ನಾಗಿ, ಕಲಿಸಿರೆನೆಗೆ ವೇದಶಾಸ್ತ್ರಗಳನ್ನು ಚೆನ್ನಾಗಿ”,
“ಸಂತಸಗೊಳುತ ಹನುಮಂತನ ವಿನಯ
ಮಾಧುರ್ಯಕೆ, ಸ್ಮರಿಸಿ ತಾನವಗೆ ಈ ಹಿಂದೆಇತ್ತ
ವಚನವನು ಇಂತೆಂದನವಗೆ ವಾತ್ಸಲ್ಯದನಿಯೊಳಗೆ,”

ಈ ಕಾವ್ಯಕಥನ ಸೃಜನಾತ್ಮಕ ಶೈಲಿಯಲ್ಲಿ ಹೊರಹೊಮ್ಮಿದೆ. ನಿಜಕ್ಕೂ ಡಾ.ಲತಾಅವರ ಈ ಮಹಾಕಾವ್ಯ ಜನಾದರಣೆಯನ್ನು ಪಡೆದು ಭಾರತೀಯರ ಹೃನ್ಮನಗಳನ್ನು ಸುಸಂಸ್ಕೃತಗೊಳಿಸುತ್ತಾ ಸಾಗಿಬಂದಿದೆ.ಡಾ.ಲತಾರಾಜಶೇಖರ್‌ ಅವರ ತಲಸ್ಪರ್ಶಿಯಾದ ಅಧ್ಯಯನ, ಅವರ ಸಂಶೋಧನಾ ಪ್ರವೃತ್ತಿ, ಕಾವ್ಯದಲ್ಲಿ ಶ್ರದ್ಧೆ, ಸೃಜನಶೀಲತೆ ವಿಷಯ ಪ್ರತಿಪಾದನೆಯಲ್ಲಿ ಸ್ವಾನುಭವದ ಒರೆಗಲ್ಲಿನಿಂದ ಕಾವ್ಯಕಲೆಯನ್ನು ಅನಾವರಣಗೊಳಿಸುವ ಇವರ ಕಾವ್ಯ ರಚನೆಯ ಕುಶಲತೆ ಅವಿಸ್ಮರಣೀಯ.

ಈ ಮಹಾಕಾವ್ಯವು ಗಾತ್ರದಂತೆ ಸತ್ವ, ಶಕ್ತಿ ಸಾಧನೆಗಳಲ್ಲಿಯೂ ಅತ್ಯಂತ ಬೃಹತ್ತತೆಯನ್ನು, ಮಹೋನ್ನತಿಯನ್ನು ಪಡೆದುಕೊಂಡಿದೆ. ಕಾವ್ಯಕ್ಷೇತ್ರದ ಜ್ಞಾನದಕ್ಷಿತಿಜವನ್ನು ಬಹಳಷ್ಟು ವಿಸ್ತರಿಸಲಾಗಿದೆ.