Dr Latha Rajshekar

Dr Latha Rajshekar

Home :: Dr Latha Rajshekar

 

Dr Latha Rajshekar

Home :: Dr Latha Rajshekar

THE WRITER OF SEVEN EPICS

Dr Latha Rajashekhar has been a distinguished member of the literati of Kannada literature for almost 3 decades. She is a noted poetess, short stories author, novelist and ardent promoter of the Kannada language. Her works have been published in leading local, national and international newspapers and periodicals. She has been interviewed, and her literary accomplishments have been broadcasted, on various radio and television channels. She travels extensively within the country and abroad in pursuit of her writing and for the promotion of Kannada language and literature.

A nature-loving conservationist, Dr Latha Rajashekhar has been titled Prakruti Kavi. She has utilized an innovative free verse style and penned many collections of poems that celebrates nature’s beauty. Dr Latha’s love for nature and poetry made her research and pursue a PhD in “Kuvempu Kavyadalli Prakruti - ondu aadhyayana “.

Dr Latha has been encouraging the state's young generation poets and writers through her foundation, Kavya Loka Trust, for years. It also conducts many cultural and literary programmes for budding writers and artists to showcase their talents.

A philanthropist at heart, she is a generous donor to various orphaned, visually challenged, differently-abled and animal welfare charities. She believes that education is key to economic empowerment and have supported hundreds of economically backward students to pursue their education. She always lends a helping hand to victims of natural calamities and contributes to relief and rehabilitation funds.

A champion of women’s causes, she is an icon to be reckoned with. Her writings encompass issues specific to women exploitations. She spends a lot of time and resources working to better the lives of underprivileged women. She always supports causes or movements that help to free women from being exploited.

Dr Latha is a member of the Karnataka Sahitya Academy. Never a bystander, she was a vanguard in fighting for language-oriented causes, particularly for according 'Classical Language Status' to the Kannada language in November 2008. She presided over Mandya District Women Writers' Conference, the Mandya District Sharana Sahitya Sammelana and Mandya District Kannada Sahitya Sammelana.

An avid traveller, she has been to the United States of America, the United Kingdom, Italy, France, Switzerland, Scotland, The Netherlands, Germany, Austria, Belgium, Egypt, Israel, Palestine, the Bahamas, Dubai, Nepal, Hong Kong and more, which helped her study and understand the world better. This led to her 4 books on America, Scandinavia, Europe, Dubai.

Born on 2nd June 1964, in Ambigarahalli in rural Karnataka to father Mr M. Krishnegowda (PWD engineer) and mother Mrs. K.S. Kaveramma, Dr Latha, a determined girl, was always encouraged to forge her own path in the male-dominated world of literature, at that time. She grew into a fine, strong woman who is a popular, knowledgeable, orator. She has a funny side making her quite the happy and easy-going person in her personal social circle. Her husband, Dr H.B. Rajashekhar, a well-respected paediatrician, continues to support her career and life choices wholeheartedly as he has from when they started their lives together. Amongst all the feathers in her cap, she has always been the dedicated and beloved mother of her son Dr H.R. Sanjay (Surgeon) and 2 daughters Dr H.R. Sowmya Dinesh (Gynaecologist) and Dr. Sowjanya Sharath Chandra. She is heartily thankful for the continued encouragement, love, support and guidance from her family.

Dr Latha’s brilliance in penmanship comes from extensive research and learning a far-thinking and contemplative mind and the amazing ability to expound the eternal values of life in simple but detailed narratives. Her in-depth understanding of religion is easily conveyed in her unique style of writing. It never fails to strike a chord and resonates deep within the reader. It makes one pause, think and understand humanity through universal love, mercy, compassion, peace, equality, truth, service and sacrifice. Celebrated for her 5 epics, she is also famous for her poems on nature, 4 travelogues and has more than 20 literary works to her credit. They all embody human values. They have been translated into Hindi, Urdu, English, Portuguese and Spanish. Some of her poem collections have been recorded, sung by the famous singers Mysuru Ananthaswamy, Manjula Gururaj, Ratnamalapraksh and Shankar Shanabhogh.

The first of 5 epics, Buddha Mahadarshana – The great Vision of The Buddha is a rich voluminous book on the vision of The Buddha, with about 800 pages and 86 chapters. It has been given the honour and distinction of being the first epic of the 21st century, making Dr Latha Rajashekhar the most highly acclaimed poet of the 21st century. It is unique as it combines poetic art with a powerful description of the greatness of The Buddha. It is a literary meditation and stands out differently from other epics created in terms of new similes, examples, metaphors and comparisons. The philosophy of love, compassion, service and sacrifice have been narrated in unparalleled poetic beauty.

Her second epic, Yesu Mahadarshana - The great Vision of Christ, is a landmark in modern Kannada literature. It is a beautiful exposition of the Holy Bible narrated in poetic form. It is described as the 'Fifth' Gospel. Running into about 1000 pages over 172 chapters, this epic presents the eternal message of love and compassion for which the Lord Jesus Christ has been revered throughout the world, in the most refreshing poetic style. The essential humanity of Jesus Christ and other Biblical Characters have been more than adequately illustrated in such a way that these characters come alive as if they are living amongst us. Deep research and studies of the old and new testaments and the 4 Gospels with visits to the places where Lord Jesus was born and supposed to have walked, went into the making of this book. Dr Latha Rajashekar extensively toured Israel, Jerusalem, Bethlehem, Nazareth, Rome, the 'Vatican and Egypt for this.

Basava Mahadarshana - The great Vision of Basaveshwara, Dr Latha’s 3rd epic, which is being printed now, would also be more than 1000 pages long. The values cherished by Basaveshwara have been beautifully scripted. Basavanna was the expression of the human values of devotion, honesty, truth, service, forgiveness and compassion. He was an embodiment of the saying 'Work is Worship'. He comes as a messenger to redeem mankind from the clutches of caste, creed and religion. These noble ideals have been eloquently elucidated by Dr Latha Rajashekar.

Mahaveera Darshana – The Vision of Mahaveera, is the 4th epic by the esteemed Doctor. The 800 paged philosophical epic placing the luminous persona of Mahaveera in the centre of the story, offers the grand vision of the Jain religion along with its cultural ethos. The exposition of Panchakalyana - from his conception in his mother’s womb, his birth, his penance, his renunciation and his attainment of Nirvana; the five stages of his life – is intricately meticulous and thorough. One of the tenets this book illuminates is the conviction that all religions are equal. In 2013, this phenomenal book was granted the highest distinction with a grand procession, on an elephant, through the streets of Mysore city – Gaja Gourava - before it was released in the presence of thousands of people. Dr Latha is the only poetess to have been awarded this honour. This epic is now being translated into Hindi.

By completing Sri Rama Mahadarshana – The great Vision of Sri Rama, her fifth epic, Dr Latha Rajashekhar has fulfilled her vow of writing five epics in the honour of Goddess Bhuvaneshwari, the presiding deity of the Kannada language. This is a record in world literature. A monumental achievement, Sri Rama Mahadarshana spreads over 1032 pages in 205 chapters, consisting of seven books (Samputa’s) - Sri Avathara Samputa, Sri Ayodhaya Samputa, Sri Aranya Samputa, Sri Kishkindha Samputa, Sri Sundara Samputa, Sri Lanka Samputa and Sri Mangala Samputa. In this story of Rama, human desires, worldly aspirations, likes and dislikes of humankind and the culminating longings of the human psyche are the issues deliberated by the poetess. Truth, sacrifice, nobility, character, moral values, kindness and commitment win over all other considerations. The poetess has successfully waded through a maze of characters, some heroic and some other villainous, with the consequent, inevitable conflict between good and evil. The style of writing can be compared to the grace of Mysore-silk, the language is simple but dignified and the thoughts left with the reader are everlasting.

At a time when the world is going through unspeakable pain, chaos, disruption and violence in the name of religion, Dr Latha’s literary masterpieces of 5 epics, shine a beacon of light, reassuring and providing soothing calm for world peace and religious harmony. She has come to be described as the wonder of the literary world, perhaps even becoming, the only poetess to have achieved this feat, in any language. She has expanded the horizon of Kannada and also Indian and the world’s religious literature.

Countries visited by Dr Latha Rajashekhar

Dr Latha Rajashekhar yearns to travel which is her passion too and thus she hopes to enlarge her vision of the world. So far she has visited countries like USA, UK, Italy, Switzerland, Scotland, Netherlands, Sweden, Norway, France, Monaco, Germany, Austria, Belgium, Lanchistain, Egypt, Israel, Palestine, Bahama, Denmark, Finland, UAE, Nepal, Hongkong, China, Srilanka, Singapore, Malaysia, Thailand, etc., besides visiting many places in India.

ಡಾ. ಲತಾ ರಾಜಶೇಖರ್

ಐದು ಮಹಾಕಾವ್ಯಗಳನ್ನು ರಚಿಸಿ ಸರ್ವಧರ್ಮ ಸಮನ್ವಯವನ್ನು ಸಾಧಿಸಿರುವ, ಜಗತ್ತಿನಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಠಿಸಿರುವ, ಅನುಪಮ ಪ್ರತಿಭಾ ಸಾಮರ್ಥ್ಯದ ಮಹಾಕವಯಿತ್ರಿ ಶ್ರೀಮತಿ ಡಾ.ಲತಾರಾಜಶೇಖರ್ ಅವರು ಸಾಹಿತ್ಯ ಲೋಕದ ಒಂದು ವಿಸ್ಮಯ. ಜಾಗತಿಕ ಮಹಾಕಾವ್ಯಗಳ ಭವ್ಯೋಜ್ವಲ ಇತಿಹಾಸದಲ್ಲಿ ಡಾ.ಲತಾರಾಜಶೇಖರ್ ಅವರಿಗೆ ಅನನ್ಯವೂ, ಅದ್ವಿತೀಯವೂ, ವಿಶಿಷ್ಟವೂ, ಕಿರೀಟ ಪ್ರಾಯವೂ ಆದ ಸ್ಥಾನವಿದೆ. ಅವರು ಏಳು ಮಹಾಕಾವ್ಯಗಳನ್ನು ರಚಿಸಿದ ವಿಶ್ವದ ಏಕೈಕ ಕವಿಯಾಗಿದ್ದಾರೆ. ಅವರು ಜ್ಞಾನಪೀಠ ಪ್ರಶಸ್ತಿಗೆ ಅರ್ಹರು.
- ಪದ್ಮಶ್ರೀ ಕರ್ನಾಟಕ ರತ್ನ ಡಾ.ದೇಜಗೌ.

ಡಾ.ಲತಾರಾಜಶೇಖರ್ ಏಳು ಮಹಾಕಾವ್ಯಗಳನ್ನು ರಚಿಸಿರುವ ವಿಶ್ವದ ಏಕೈಕ ಮಹಾಕವಿ ಹಾಗೂ ಮಹಾಕಾವ್ಯ ತಪಸ್ವಿನಿ. ಬೆಳಕಿನ ಕವಯಿತ್ರಿ ಎಂದೇ ಹೆಸರಾದ ಡಾ.ಲತಾ ವಿಶ್ವಕ್ಕೆ “ಮಹಾದರ್ಶನಗಳ ಮಹಾಬೆಳಕು” ನೀಡಿದ ಏಕೈಕ ಕವಯಿತ್ರಿ. ಇದು ಸಾರ್ವಕಾಲಿಕ ದಾಖಲೆಯೂ ಹೌದು. ಅವರ ಪ್ರತಿಯೊಂದು ಮಹಾಕಾವ್ಯವೂ ಕೂಡ ಅದ್ಭುತ ಸೃಜನಶೀಲ ಪ್ರತಿಭೆಯ ಅಪೂರ್ವ ಸ್ವಯಂಪ್ರಕಾಶದಿಂದ ರಾರಾಜಿಸುತ್ತಿದೆ ಹಾಗೂ ಅಲೌಕಿಕ ಜ್ಞಾನಪ್ರಕಾಶದಿಂದ ಕಂಗೊಳಿಸುತ್ತಿದೆ. ಈ ಮಹಾಕಾವ್ಯಗಳು ಜೀವನದರ್ಶನ, ಜೀವನ ಮೌಲ್ಯಗಳ ಆಕರವಾಗಿವೆ.
- ಪ್ರೊ. ಕೆ.ಭೈರವಮೂರ್ತಿ

ಡಾ.ಲತಾರಾಜಶೇಖರ್ರವರು ಸಾರಸ್ವತ ಲೋಕದ ದಿಗ್ಗಜರ ಅಪಾರವಾದ ಪ್ರಶಂಸೆ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಜನಮಾನಸವನ್ನು ಸೂರೆಗೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಅಪೂರ್ವ ಸಾಧನೆಯನ್ನು ಮಾಡಿರುವ ಇವರು ವಿಶ್ವವಿಭೂತಿಗಳಾದ ಬುದ್ದ, ಯೇಸು, ಬಸವೇಶ್ವರ, ಮಹಾವೀರ, ಶ್ರೀರಾಮ, ಹನುಮ ಹಾಗೂ ಭಗವದ್ಗೀತ ಇವರುಗಳನ್ನು ಕುರಿತಂತೆ ಬೃಹತ್ತು, ಮಹತ್ತುಗಳಿಂದ ಕೂಡಿದ ಐದು ಮಹಾಕಾವ್ಯಗಳನ್ನು ರಚಿಸುವ ಮೂಲಕ ಭಾರತೀಯ ಹಾಗೂ ವಿಶ್ವ ಸಾಹಿತ್ಯದ ದಿಗಂತವನ್ನು ವಿಸ್ತರಿಸಿದ್ದಾರೆ. ಕನ್ನಡ ತಾಯಿ ಭುವನೇಶ್ವರಿಯ ಶ್ರೀ ಮುಕುಟಕ್ಕೆ ವಜ್ರದ ಗರಿಯನ್ನು ತೊಡಿಸಿದ್ದಾರೆ. ಹಾಗೂ ಐದು ಮಹಾಕಾವ್ಯಗಳನ್ನು ರಚಿಸಿದ ವಿಶ್ವದ ಏಕೈಕ ಕವಿ ಎಂಬ ಮನ್ನಣೆಗೆ ಪಾತ್ರರಾಗಿದ್ದಾರೆ. ತಮ್ಮಅಪೂರ್ವವಾದ ಸಾಹಿತ್ಯ ರಚನೆಯ ಮೂಲಕ ಕನ್ನಡವನ್ನು ವಿಶ್ವದ ಭಾಷೆಯನ್ನಾಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆೆ.

“ಸಾರಸ್ವತ ಲೋಕದ ವಿಸ್ಮಯ” ಎಂದೆನಿಸಿರುವ ಡಾ.ಲತಾ ಅವರು ತಮ್ಮ ಮಹಾಕಾವ್ಯಗಳ ರಚನೆಗಾಗಿ ದೇಶ ವಿದೇಶಗಳಲ್ಲಿ ಸಂಚರಿಸಿ ಕ್ಷೇತ್ರಾಧ್ಯಯನವನ್ನು ಮಾಡಿದ್ದಾರೆ. ಸತತ ಎರಡು ದಶಕಗಳ ಕಾಲ ಈ ಮಹಾಕಾವ್ಯ ನಿರ್ಮಾಣ ಕಾರ್ಯವನ್ನುಒಂದು ವ್ರತದಂತೆ ಕೈಗೊಂಡು ಪೂರ್ಣಗೊಳಿಸಿದ್ದಾರೆ. ಅವರ ಬುದ್ದ ಮಹಾದರ್ಶನ, ಯೇಸು ಮಹಾದರ್ಶನ, ಬಸವ ಮಹಾದರ್ಶನ, ಮಹಾವೀರ ಮಹಾದರ್ಶನ, ಶ್ರೀ ರಾಮ ಮಹಾದರ್ಶನ, ಹನುಮ ಮಹಾದರ್ಶನ ಹಾಗೂ ಭಗವದ್ಗೀತ ಮಹಾದರ್ಶನ ಮಹಾಕಾವ್ಯಗಳು ಅವರ ಈ ಒಂದು ವಾಜ್ಮೀಯ ತಪದ ಸ್ವಾದು ಫಲಗಳಾಗಿವೆ. ಈ ಮೂಲಕವಾಗಿ ಲತಾ ಅವರು ಈ ಮಹಾ ಪುರುಷರು ಸಾರಿದ ಚಿರಂತನ ಮಾನವೀಯ ಮೌಲ್ಯಗಳಾದ ಪ್ರೀತಿ, ಕರುಣೆ, ತ್ಯಾಗ, ಕ್ಷಮೆ, ಸತ್ಯ, ಶಾಂತಿ, ಸಮಾನತೆಗಳನ್ನು ಎತ್ತಿಹಿಡಿದಿದ್ದಾರೆ ಹಾಗೂ ಧಾರ್ಮಿಕ ಸಾಮರಸ್ಯ, ಭ್ರಾತೃತ್ವ ಭಾವನೆ, ರಾಷ್ಟ್ರೀಯ ಭಾವ್ಯೆಕ್ಯತೆಗಳಿಗಾಗಿ ಶ್ರಮಿಸಿದ್ದಾರೆ. ಅದೇ ರೀತಿ ಅವರು ವಿಶ್ವಪ್ರೀತಿ ಹಾಗೂ ವಿಶ್ವಪ್ರೇಮ ಇವುಗಳನ್ನು ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡಿದ್ದಾರೆ.

ಡಾ.ಲತಾರಾಜಶೇಖರ್ ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ.,(ಕನ್ನಡ), ಹಾಗೂ ಪಿ.ಹೆಚ್.ಡಿ. ಪದವೀಧರರು. “ಕುವೆಂಪು ಕಾವ್ಯದಲ್ಲಿ ಪ್ರಕೃತಿ-ಒಂದು ಅಧ್ಯಯನ” ಅವರ ಪಿ.ಹೆಚ್.ಡಿ. ಮಹಾಪ್ರಬಂಧ. ಅವರು ದೇಶ ವಿದೇಶಗಳಲ್ಲಿ ಸಂಚರಿಸಿ ತಮ್ಮ ಜ್ಞಾನಕ್ಷಿತಿಜವನ್ನು ವಿಸ್ತರಿಸಿಕೊಂಡಿದ್ದಾರೆ. ಅಮೇರಿಕಾ, ಇಂಗ್ಲೆಂಡ್, ಇಟಲಿ, ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಈಜಿಪ್ಟ್, ಇಸ್ರೆಲ್, ಪ್ಯಾಲೆಸ್ತೆನ್, ಸ್ವೀಡನ, ನಾರ್ವೆ, ಚೈನಾ, ಹಾಂಗ್ ಕಾಂಗ್ ಮುಂತಾದ ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ.

ಕನ್ನಡವನ್ನು ತಮ್ಮ ಉಸಿರಾಗಿಸಿಕೊಂಡಿರುವ ಡಾ.ಲತಾ ಅವರು ಕಾವ್ಯ, ಮಹಾಕಾವ್ಯ, ಕಾದಂಬರಿ, ಸಣ್ಣಕತೆ, ನಾಟಕ, ಸಂಶೋಧನೆ, ಸಂಪಾದನೆ, ಜೀವನಚರಿತ್ರೆ, ಪ್ರವಾಸಕಥನ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃಷಿ ಮಾಡಿ ಐವತ್ತು ಕೃತಿಗಳನ್ನು ರಚಿಸಿದ್ದಾರೆ. ಇವರ ಕಥೆ, ಕವಿತೆ, ಲೇಖನ, ಸಂದರ್ಶನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಅನೇಕ ಅಂತ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.ಇವರ ಕಾದಂಬರಿಗಳು ನಾಡಿನ ಪ್ರಖ್ಯಾತ ನಿಯತಕಾಲಿಕೆಗಳಲ್ಲಿ, ದಿನ ಪತ್ರಿಕೆಗಳಲ್ಲಿ ಪ್ರಕಟವಗಿದ್ದು, ಅಪಾರಜನಪ್ರಿಯತೆಯನ್ನುಗಳಿಸಿವೆ. ಆಕಾಶವಾಣಿ, ದೂರದರ್ಶನಗಳಲ್ಲಿ ಇವರಕಾವ್ಯ, ಸಂದರ್ಶನಗಳು ಪ್ರಸಾರವಾಗಿವೆ ಹಾಗೂ ರಾಷ್ಟ್ರೀಯ ಮತ್ತುಅಂತರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಪಾಲ್ಗೊಂಡಿದ್ದಾರೆ.

ಚಿಂತನಶೀಲ ಹಾಗೂ ಸ್ನೇಹಶೀಲ ಮನಸ್ಸಿನ ಡಾ.ಲತಾರಾಜಶೇಖರ್ ಅವರ ಕಾವ್ಯ ಕೃತಿಗಳು ಜಗತ್ತಿನ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಈಗಾಗಲೇ ಅವರ ಆಯ್ದ ಕವಿತೆಗಳ ಹಿಂದಿ ಮತ್ತುಇಂಗ್ಲೀಷ್ ಸಂಕಲನಗಳು ಹೊರಬಂದಿವೆ. ನೇಪಾಳಿ ಹಾಗೂ ಉರ್ದು ಭಾಷೆಗೂ ಕೆಲವು ಕವಿತೆಗಳು ಅನುವಾದಗೊಂಡಿದೆ. ಇಲ್ಲಿಇವರ ಮಹಾಕಾವ್ಯಗಳೂ ಸಹ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗೆ ಅನುವಾದಗೊಂಡಿವೆ. ಇವರ ಮಹಾಕಾವ್ಯಗಳನ್ನೂ ಒಳಗೊಂಡಂತೆ ಇವರ ಬಹುತೇಕ ಕೃತಿಗಳು ಈಗಾಗಲೇ ಮರುಮುದ್ರಣಗೊಂಡಿವೆ. ಹಾಗೆಯೇ ಇವರ ಭಾವಗೀತೆಗಳ ಎರಡು ಧ್ವನಿಸುರಳಿಗಳು ಹೊರಬಂದಿದ್ದು ನಾಡಿನ ಪ್ರಖ್ಯಾತ ಗಾಯಕರುಗಳು ಅವುಗಳಿಗೆ ತಮ್ಮ ದನಿ ನೀಡಿದ್ದಾರೆ. ವಿಶಾಲ ಹೃದಯಿಯಾದ ಡಾ.ಲತಾ ಅವರು ಅಪಾರ ಸಾಮಾಜಿಕ ಕಾಳಜಿಯನ್ನೂ ಹೊಂದಿದು, ಎಲೆ ಮರೆಯಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಅನಾಥ ಮಕ್ಕಳ ಶಾಲೆ, ಅಂಗವಿಕಲರ, ಆಂಧರ, ಬುದ್ದಿ ಮಾಂದ್ಯರ ಸಂಸ್ಥೆಗಳಿಗೆ ಬರ, ಪ್ರವಾಹ ಪೀಡಿತರ ನಿಧಿಗಳಿಗೆ, ಪ್ರಾಣಿದಯಾ ಸಂಘಗಳಿಗೆ ಉದಾರ ಕೊಡುಗೆಯನ್ನು ನೀಡಿದ್ದಾರೆ. ಹಾಗೆಯೇ ಆರ್ಥಿಕವಾಗಿ ಹಿಂದುಳಿದ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇವರು ನೆರವಿನ ಹಸ್ತವನ್ನು ಚಾಚಿದ್ದಾರೆ.

ಮಹಿಳಾ ಸಂವೇದನೆಯ, ಮಹಿಳಾಪರ ನಿಲುವಿನ ಡಾ.ಲತಾರಾಜಶೇಖರ್ ಅವರು ಸ್ತ್ರೀಯರ ಶೋಷಣೆ, ಸಮಸ್ಯೆಗಳನ್ನು ಕುರಿತು ತಮ್ಮ ಕಾದಂಬರಿ, ಕೃತಿಗಳಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಪ್ರಕೃತಿ ಪ್ರೇಮಿಯಾದಇವರು ಪರಿಸರ ಸಂರಕ್ಷಣೆಯ ಬಗೆಗೆ ಅನನ್ಯ ಕಾಳಜಿಯನ್ನು ಹೊಂದಿದ್ದಾರೆ. ತಮ್ಮ ಕೃತಿಗಳಲ್ಲಿ ನಿಸರ್ಗವನ್ನುಅಸದೃಶವಾಗಿ ವರ್ಣಿಸಿದ್ದಾರೆ. “ಪ್ರಕೃತಿ ಕವಿ” ಎಂದೆನಿಸಿದ್ದಾರೆ. ಸೌಜನ್ಯ ಸಜ್ಜನಿಕೆಗಳ ಸಂಗಮವಾದ ಡಾ.ಲತಾರಾಜಶೇಖರ್ ಅವರ ಏಳು ಮಹಾಕಾವ್ಯಗಳನ್ನೂ ನಾಡಿನ ಜನಗೆ ಒಗ್ಗೂಡಿ ಅಲಂಕೃತ ಆನೆಗಳ ಮೇಲಿರಿಸಿ ಜಾನಪದ ತಂಡಗಳೊಂದಿಗೆ ಮೈಸೂರಿನ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌರವಿಸಿದ್ದಾರೆ. ಸಾಹಿತ್ಯ ಲೋಕದ ದಿಗ್ಗಜರು ಹಾಗೂ ಸಹಸ್ರಾರು ಮಂದಿ ಅದಕ್ಕೆ ಸಾಕ್ಷಿಯಾಗಿದ್ದಾರೆ.

ನಾಡು ನುಡಿಗಳ ಬಗೆಗೆ ಅತಿಶಯವಾದ ಅಭಿಮಾನವನ್ನು ಹೊಂದಿರುವ ಡಾ.ಲತಾರಾಜಶೇಖರ್ ಅವರು ಹಲವಾರು ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಕಾವೇರಿ ಚಳುವಳಿ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ತಂದುಕೊಡುವ ನಿಟ್ಟಿನಲ್ಲಿ ನಡೆದ ಹೋರಾಟ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೊಳಿಸಲು ನಡೆದ ಹೋರಾಟ ಹಾಗೂ ನಾಡು ನುಡಿಗಳಿಗೆ ಸಂಬ0ಧಿಸಿದ ಪ್ರಮುಖ ಹೋರಾಟ, ಪ್ರತಿಭಟನೆ, ಧರಣಿ ಉಪವಾಸ ಸತ್ಯಾಗ್ರಗಳಲ್ಲಿ ಪಾಲ್ಗೊಂಡಿದ್ದಾರೆ. ಕ್ರಿಯಾಶೀಲ ವ್ಯಕ್ತಿತ್ವದ ಡಾ.ಲತಾರಾಜಶೇಖರ್ ಅವರು ಕರ್ನಾಟಕ ಸಾಹಿತ್ಯಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಮಹತ್ವದ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ತಮ್ಮದೇ ಆದ “ಕಾವ್ಯಲೋಕ ಟ್ರಸ್ಟ್ “ನ ಅಧ್ಯಕ್ಷರಾಗಿ, ವಿವಿಧ ಬಗೆಯ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಹಾಗೂ ಯುವ ಬರಹಗಾರರಿಗೆ ತುಂಬು ಹೃದಯದ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಮಹಾಕವಿ ಡಾ.ಲತಾರಾಜಶೇಖರ್ ಸಾಹಿತ್ಯ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾಗಿ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬಹುಮುಖ ಪ್ರತಿಭೆಯ ಜನಪರ ಕಾಳಜಿಯ ಡಾ.ಲತಾರಾಜಶೇಖರ್ ಅವರ ಸಾಹಿತ್ಯ ಸಾದನೆಗೆ ಹಲವಾರು ರಾಜ್ಯ, ರಾಷ್ಟ್ರ, ಅಂತ ರಾಷ್ಟ್ರೀಯ ಪ್ರತಿಷ್ಠಿತ ಪುರಸ್ಕಾರಗಳು ಸಂದಿವೆ.

೨೦೧೨ ಜನಜನವರಿಯಲ್ಲಿ ಅಬುದಾಬಿಯಲ್ಲಿ ನಡೆದ ಕುವೆಂಪು ಕಲಾ ಉತ್ಸವ ಹಾಗೂ ವಿಶ್ವಕನ್ನಡ ಸಮ್ಮೇಳನದ ಸರ್ವಾಧ್ಯಕ್ಷತೆಯ ಮಹತ್ವದ ಗೌರವ ಇವರಿಗೆ ಸಂದಿದೆ. ಹಾಗೆಯೇ ಡಾ.ಲತಾ ಅವರು 2011 ರಲ್ಲಿ ಸಿಂಗಪೂರ್ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಹಾಗೂ 2014 ರಲ್ಲಿ ಹಾಂಗ್ ಕಾಂಗ್ ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ ಹಾಗೂ ಕುವೆಂಪು ಉತ್ಸವದ ಉದ್ಘಾಟಕರಾಗಿ ಭಾಗವಹಿಸಿದ್ದಾರೆ. ಅದೇ ರೀತಿ ಮಂಡ್ಯ ಜಿಲ್ಲೆಯ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ, ಪ್ರಥಮ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ಕವಿ ಕಾವ್ಯ ಮೇಳ ಇವುಗಳ ಸಮ್ಮೇಳನ ಅಧ್ಯಕ್ಷತೆಯ ಗೌರವವೂ ಲಭಿಸಿದೆ.

“ಮಹಾಕಾವ್ಯ ಸರಸ್ವತಿ, ಸಾಹಿತ್ಯ ಲೋಕದ ಧೃವತಾರೆ, ಮಹಾಕಾವ್ಯಗಂಗೋತ್ರಿ” ಮುಂತಾದ ಹೆಸರುಗಳನ್ನು ಗಳಿಸಿದ ಲತಾ ಅವರ ಸಾಹಿತ್ಯ ಸಾಧನೆಯನ್ನು ಗೌರವಿಸಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಅಂತರಾಷ್ಟ್ರೀಯ ವಿಶ್ವ ಕವಿ ಪ್ರಶಸ್ತಿ ಹಾಗೂ ಅಂತ ರಾಷ್ಟ್ರೀಯ ಅಹಿಂಸಾ ಪುರಸ್ಕಾರ, ರಾಷ್ಟ್ರೀಯ ಕೆಂಪೇಗೌಡ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವಕರ್ಮ ಪ್ರಶಸ್ತಿ ಹಾಗೂ ಚಿನ್ನದ ಪದ, ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ, ಡಾ.ಸಂ.ಶಿ. ಭೂಸನೂರ ಮಠ ಪ್ರಶಸ್ತಿ, ಸಾವಿತ್ರಮ್ಮದೇಜಗೌ ಪ್ರಶಸ್ತಿ, ಮಾನವರತ್ನ ಪ್ರಶಸ್ತಿ, ಸಾಹಿತ್ಯ ಸರಸ್ವತಿ ಪ್ರಶಸ್ತಿ, ರತ್ನಾಕರವರ್ಣಿ ಪ್ರಶಸ್ತಿ, ರಾಷ್ಟçಕವಿ ಕುವೆಂಪು ಪ್ರಶಸ್ತಿ, ಅತ್ತಿಮಬ್ಬೆಕಾವ್ಯ ಪ್ರಶಸ್ತಿ, ಮಹಾಕವಿ ರತ್ನಪ್ರಶಸ್ತಿ, ವಚನ ಸಾಹಿತ್ಯ ಶ್ರೀ ಪ್ರಶಸ್ತಿ ಮುಂತಾದ ಐವತ್ತಕ್ಕೂ ಹೆಚ್ಚು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಭಾರತೀಯ ವಿದ್ಯ ಭವನದ ಡಾ.ಕೆ.ಎಂ ಮುನ್ಷಿ ಪುರಸ್ಕಾರ, ರೋಟರಿ ಸಂಸ್ಥೆಯ ಗೌರವ ಸದಸ್ಯತ್ವಕ್ಕೂಇವರು ಪಾತ್ರರಾಗಿದ್ದಾರೆ.

ಆತ್ಮೀಯ ಸ್ನೇಹ ಶೀಲ ವ್ಯಕ್ತಿತ್ವ ಲತಾ ಅವರು ಸ್ತ್ರೀ ಪರ ಧೋರಣೆಯನ್ನು, ಕನ್ನಡ ಪರ ಕಾಳಜಿಯನ್ನ ಹೊಂದಿದ್ದಾರೆ. ನಾಡು ನುಡಿಗಳಿಗೆ ಸಂಬಂಧಿಸಿದ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ.ಸರ್ವಧರ್ಮ ಸಮನ್ವಯತೆ, ವಿಶ್ವ ಭ್ರಾತೃತ್ವ ಹಾಗೂ ವಿಶ್ವ ಶಾಂತಿ ಇವುಗಳು ಲತಾ ಅವರ ಮಹಾಕಾವ್ಯಗಳ ಆಶಯಗಳಾಗಿವೆ.

ಡಾ. ಲತಾರಾಜಶೇಖರ್ ಅವರ ಸಾಹಿತ್ಯವನ್ನು ಹಾಗೂ ಮಹಾಕಾವ್ಯಗಳನ್ನು ಕುರಿತಂತೆ ಈಗಾಗಲೇ ನಾಡಿನ ಹಲವೆಡೆಗಳಲ್ಲಿ ಹಲವಾರು ಮಹತ್ವದ ವಿಚಾರ ಸಂಕಿರ್ಣಗಳು ನಡೆದಿವೆ. ಡಾ. ಲತಾ ಅವರ ಸಾಹಿತ್ಯವನ್ನುಕುರಿತಂತೆ ವಿಶ್ವವಿದ್ಯಾಲಯಗಳಲ್ಲಿ ಪಿ.ಹೆಚ್.ಡಿ. ಅಧ್ಯಯನವನ್ನು ನಡೆಸಲಾಗುತ್ತಿದೆ.ಈಗಾಗಲೇ ಕಿತ್ತೂರುರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದಲ್ಲಿ “ಡಾ. ಲತಾರಾಜಶೇಖರ್ ಅವರ ಮಹಾಕಾವ್ಯಗಳು - ಒಂದು ಅಧ್ಯಯನ” ಎಂಬ ಪಿ.ಹೆಚ್.ಡಿ. ಮಹಾಪ್ರಬಂಧವು ಪ್ರಕಟವಾಗಿದೆ.ಅದೇ ರೀತಿ ಬಿಜಾಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ “ಡಾ.ಲತಾರಾಜಶೇಖರ್ ಅವರ ಸಮಗ್ರ ಕೃತಿಗಳು - ಒಂದು ಅಧ್ಯಯನ” ಎಂಬ ವಿಷಯವಾಗಿ ಪಿ.ಹೆಚ್.ಡಿ. ಅಧ್ಯಯನವು ನಡೆಯುತ್ತಿದೆ. ಹಾಗೂ ಇದೇ ವಿಶ್ವವಿದ್ಯಾಲಯದ ಎಂ.ಎ. ತರಗತಿಗಳಿಗೆ ಇವರ “ಮಹಾವೀರ ಮಹಾದರ್ಶನ” ಮಹಾಕಾವ್ಯದ ಕೆಲವು ಭಾಗಗಳು ಪಠ್ಯವಾಗಿವೆ. ಸದ್ಯದಲ್ಲಿಯೇ ಇವರನ್ನುಕುರಿತ ಸಾವಿರ ಪುಟಗಳ ಒಂದು ಅಭಿನಂದನಾಗ್ರಂಥವು ಸಹ ಹೊರಬರಲಿದೆ.